Saturday 16 June 2018

ರಾಷ್ಟೀಯ ಆದಾಯ' ಎಂದರೇನು

☀️  *'ರಾಷ್ಟೀಯ ಆದಾಯ' ಎಂದರೇನು?*

*— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್ಯವಾಗಿದೆ. ಅದು ಒಂದು ವರ್ಷದ ಅವಧಿಯಲ್ಲಿ ದೇಶವೊಂದು ಗಳಿಸುವ ಸಮಗ್ರ ಆದಾಯವಾಗಿರುತ್ತದೆ.'*

— 'ರಾಷ್ಟೀಯ ಆದಾಯ' ವನ್ನು 'ರಾಷ್ಟೀಯ ಭಾಜ್ಯಾಂಶ'(National dividend), 'ರಾಷ್ಟೀಯ ಉತ್ಪನ್ನ'(National Output) , 'ರಾಷ್ಟೀಯ ವೆಚ್ಚ' (National Expenditure) ಎಂಬ ಪದಗಳಿಗೆ ಪರ್ಯಾಯ ಪದವನ್ನಾಗಿ ಬಳಸಲಾಗುತ್ತಿದೆ.

☀️  *ಒಟ್ಟು ರಾಷ್ಟೀಯ ಉತ್ಪನ್ನ (Gross National Product—GNP) ಎಂದರೇನು?*

—  *ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶವೊಂದು ಉತ್ಪಾದಿಸುವ ಸರಕು ಮತ್ತು ಸೇವೆಗಳ ಸಮಗ್ರ ಮೌಲ್ಯವೇ ಒಟ್ಟು ರಾಷ್ಟೀಯ ಉತ್ಪನ್ನ.*

*—> ಒಟ್ಟು ರಾಷ್ಟೀಯ ಉತ್ಪನ್ನ = ನಿವ್ವಳ ರಾಷ್ಟೀಯ ಉತ್ಪನ್ನ + ಸವಕಳಿ ವೆಚ್ಚ (Depreciation Cost)*

☀️  *ನಿವ್ವಳ ರಾಷ್ಟೀಯ ಉತ್ಪನ್ನ (Net National Product—NNP) ಎಂದರೇನು?*

—  *ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಮಾಡಲಾದ ನಿವ್ವಳ ಉತ್ಪಾದನೆಯ ಮಾರುಕಟ್ಟೆಯ ಮೌಲ್ಯವನ್ನು 'ನಿವ್ವಳ ರಾಷ್ಟೀಯ ಉತ್ಪನ್ನ' ಎನ್ನಲಾಗುತ್ತದೆ.*

*—>  ನಿವ್ವಳ ರಾಷ್ಟೀಯ ಉತ್ಪನ್ನ =  ಒಟ್ಟು ರಾಷ್ಟೀಯ ಉತ್ಪನ್ನ -ಸವಕಳಿ ವೆಚ್ಚ.*

☀️  *ಒಟ್ಟು ದೇಶಿಯ ಉತ್ಪನ್ನ (Gross Domestic Product—GDP) ಎಂದರೇನು?*

—  *ಒಟ್ಟು ದೇಶಿಯ ಉತ್ಪನ್ನವು ಆರ್ಥಿಕತೆಯೊಂದು ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು ಮತ್ತು ಸೇವೆಗಳ ಪರಿಚಲನೆಯ ಮಾಪನವಾಗಿದೆ.*

★ ಅದು ಸರಕು ಮತ್ತು ಸೇವೆಗಳ ಉತ್ಪಾದನೆಯನ್ನು ಮಾರುಕಟ್ಟೆ ಬೆಲೆಗಳಲ್ಲಿ ಮೌಲ್ಯದ ಅಂದಾಜು ಮಾಡಿ ಒಟ್ಟುಗೂಡಿಸುವ ಮೂಲಕ ಪಡೆಯಲಾಗುತ್ತದೆ.

☀️  *ನಿವ್ವಳ ದೇಶಿಯ ಉತ್ಪನ್ನ (Net Domestic Product—NDP) ಎಂದರೇನು?*

— ಮಾರುಕಟ್ಟೆ ಬೆಲೆಯಲ್ಲಿ ನಿವ್ವಳ ದೇಶಿಯ ಉತ್ಪನ್ನ ಎಂದರೆ ದೇಶದೊಳಗಡೆ ಉತ್ಪಾದಿಸಲಾದ ಸರಕು ಮತ್ತು ಸೇವೆಗಳ ಸವಕಳಿ ವೆಚ್ಚವನ್ನು ಹೊರತುಪಡಿಸಿದ ನಿವ್ವಳ ಮಾರುಕಟ್ಟೆ ಮೌಲ್ಯವಾಗಿದೆ.

★ ಉತ್ಪಾದನಾಂಗ ವೆಚ್ಚದಲ್ಲಿನ ನಿವ್ವಳ ದೇಶಿಯ ಉತ್ಪನ್ನ ಎಂದರೆ ಉತ್ಪಾದನಾಂಗಗಳು ಪಡೆಯುವ ಆದಾಯಗಳ ಮೊತ್ತವನ್ನು ಪ್ರತಿನಿಧಿಸುವ ದೇಶದೊಳಗಡೆ ಉತ್ಪಾದಿಸಿದ ಸರಕು ಮತ್ತು ಸೇವೆಗಳ ನಿವ್ವಳ ಮೌಲ್ಯವಾಗಿದೆ.

★  ನಿವ್ವಳ ದೇಶಿಯ ಉತ್ಪನ್ನವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.

*—>  ಮಾರುಕಟ್ಟೆ ಬೆಲೆಯಲ್ಲಿ NDP = ಮಾರುಕಟ್ಟೆ ಬೆಲೆಯಲ್ಲಿ GDP - ಸವಕಳಿ ವೆಚ್ಚ.*

*—>  ಉತ್ಪಾದನಾಂಗ ವೆಚ್ಚದಲ್ಲಿ NDP = ಮಾರುಕಟ್ಟೆ ಬೆಲೆಯಲ್ಲಿ NDP - ಪರೋಕ್ಷ ತೆರಿಗೆ + ಸಹಾಯಧನ.*

☀️  *ನಾಮರೂಪಿ(ಹಣರೂಪಿ) ಆದಾಯ (Nominal National Income) ಎಂದರೇನು?*

— ಪ್ರಸ್ತುತ ಬೆಲೆಗಳಲ್ಲಿ ಅಂದಾಜು ಮಾಡಲಾದ ರಾಷ್ಟೀಯ ಆದಾಯವನ್ನು ನಾಮರೂಪಿ(ಹಣರೂಪಿ) ಆದಾಯ ಎನ್ನಲಾಗುತ್ತದೆ.

☀️  *ನೈಜ ರಾಷ್ಟೀಯ ಆದಾಯ (Real National Income) ಎಂದರೇನು?*

—  *ಆಧಾರ ವರ್ಷವನ್ನಾಗಿ ತೆಗೆದುಕೊಂಡ ವರ್ಷದ ಸಾಮಾನ್ಯ ಬೆಲೆಯ ಮಟ್ಟದ ಮುಖೇನ ವ್ಯಕ್ತಪಡಿಸಲಾಗುವ ರಾಷ್ಟೀಯ ಆದಾಯವನ್ನು ನೈಜ ರಾಷ್ಟೀಯ ಆದಾಯ ಎನ್ನಲಾಗುತ್ತದೆ.*

☀️  *ತಲಾ ಆದಾಯ (Percapita Income) ಎಂದರೇನು?*
.
—  *ಒಂದು  ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಒಂದು ವರ್ಷದ ಸರಾಸರಿ ಆದಾಯವನ್ನು ತಲಾ ಆದಾಯ ಎನ್ನಲಾಗುತ್ತದೆ.*

★ ತಲಾ ಆದಾಯವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.

                         *ರಾಷ್ಟೀಯ ಆದಾಯ*
*—> ತಲಾ ಆದಾಯ = ———————*
                        *ಒಟ್ಟು ಜನಸಂಖ್ಯೆ*

Tuesday 12 June 2018

ಭಾರತದಲ್ಲಿ ಮೊದಲಿಗರು

🌕*ಭಾರತದಲ್ಲಿ ಮೊದಲಿಗರು*🌕

1) IAS ಅಧಿಕಾರಿಯಾದ ಮೊದಲ ಭಾರತೀಯ ಮಹಿಳೆ.
ಉತ್ತರ:: *ಅನ್ನಾ ರಾಜನ್ ಜಾರ್ಜ್*
2) ಭಾರತದ ಪ್ರಥಮ ರಾಷ್ಟ್ರಪತಿ.
ಉತ್ತರ:: *ಡಾ. ರಾಜೇಂದ್ರ ಪ್ರಸಾದ್.*
3) ಸೇನಾ ಪಡೆಯ ಪ್ರಥಮ ಮುಖಸ್ಥ.
ಉತ್ತರ:: *ಜನರಲ್ ಮಾಣಿಕ್ ಷಾ.*
4)ಭಾರತದ ಮೊದಲ ಗವರ್ನರ್ ಜನರಲ್.
ಉತ್ತರ:: *ಮೌಂಟ್ ಬ್ಯಾಟನ್*.
5)ಭಾರತದ ಮೊದಲ ಉಪ ರಾಷ್ಟ್ರಪತಿ.
ಉತ್ತರ:: *ಡಾ. ಎಸ್. ರಾಧಾಕೃಷ್ಣನ್.*
6)ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್.
ಉತ್ತರ:: *ಸಿ. ರಾಜಗೊಪಾಲಾಚಾರಿ*.
7)ಭಾರತದ ಮೊದಲ ಗಗನ ಯಾತ್ರಿ.
ಉತ್ತರ:: *ರಾಕೇಶ್ ಶರ್ಮಾ*.
8)ಭಾರತದ ಮೊದಲ ಮುಖ್ಯ ನ್ಯಾಯಾಧೀಶರು.
ಉತ್ತರ:: *ನ್ಯಾಯಮೂರ್ತಿ ಹೀರಾಲಾಲ್ ಕನಿಯಾ*.
9)ಭಾರತದ ಮೊದಲ ಪೈಲೆಟ್.
ಉತ್ತರ:: *J.R.D.ಟಾಟಾ.*
10)ಎವೆರೆಸ್ಟ್ ಏರಿದ ಮೊದಲ ಭಾರತೀಯ.
ಉತ್ತರ:: *ಶರ್ಪಾ ತೆನ್ನ್ ಸಿಂಗ್.*
11)ಭಾರತ ರತ್ನ ಪಡೆದ ಮೊದಲ ವ್ಯಕ್ತಿ.
ಉತ್ತರ:: *ಸಿ. ರಾಜಗೊಪಲಾಚಾರಿ.*
12)ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಪ್ರಥಮ ಮುಸ್ಲಿಂ
ವ್ಯಕ್ತಿ.
ಉತ್ತರ:: *ಡಾ. ಜಾಕೀರ್ ಹುಸೇನ್.*
13)ಮ್ಯಾಗಸೆ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ.
ಉತ್ತರ:: *ಆಚಾರ್ಯ ವಿನೋಬಾ ಭಾವೆ.*
14)ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತದ ಮಹಿಳೆ.
ಉತ್ತರ:: *ಬಾನು ಅತೀಯಾ.*
15)ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ
ಅಧ್ಯಕ್ಷಿಣಿ.
ಉತ್ತರ:: *ಅನಿಬೆಸೆಂಟ್.*
16)ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಪ್ರಥಮ
ಭಾರತದ ಮಹಿಳೆ.
ಉತ್ತರ:: *ವಿಜಯಲಕ್ಷ್ಮೀ ಪಂಡಿತ್.*
17)ಪ್ರಥಮ ಮಹಿಳಾ ಗವರ್ನರ್.
ಉತ್ತರ:: *ಸರೋಜಿನಿ ನಾಯ್ಡು*
18)ನೋಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ.
ಉತ್ತರ:: *ಮದರ್ ತೆರೆಸಾ.*
19)IPS ಅಧಿಕಾರಿಯಾದ ಮೊದಲ ಮಹಿಳೆ.
ಉತ್ತರ:: *ಕಿರಣ್ ಬೇಡಿ.*
20)ಭಾರತದ ಪ್ರಥಮ ವಿಮಾನ ಚಾಲಕಿ.
ಉತ್ತರ:: *ಪ್ರೇಮಾ ಮಾಥುರ್*.
21)ಪ್ರಥಮ ಮಹಿಳಾ ಪ್ರಧಾನಿ.
ಉತ್ತರ:: *ಇಂದಿರಾ ಗಾಂಧಿ*
22)ವಿಶ್ವ ಸುಂದರಿ ಆದ ಮೊದಲ ಭಾರತದ ಮಹಿಳೆ.
ಉತ್ತರ:: *ಸುಶ್ಮಿತಾ ಸೇನ್.*
23)M.A.ಮುಗಿಸಿದ ಮೊದಲ ಭಾರತದ ಮಹಿಳೆ.
ಉತ್ತರ:: *ಚಂದ್ರಮುಖಿ ಬೋಸ್.*
24)ಭಾರತದ ಪ್ರಥಮ ಮಹಿಳಾ ರಾಯಭಾರಿ.
ಉತ್ತರ:: *C.B.ಮುತ್ತಮ್ಮ*.
25)ಪ್ರಥಮ ಮಹಿಳಾ ಮುಖ್ಯಮಂತ್ರಿ.
ಉತ್ತರ: *ಸುಚೇತಾ ಕೃಪಾಲಾನಿ*.
26)ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ.
ಉತ್ತರ:: *ಪ್ರತಿಭಾ ಪಾಟೀಲ್*.
27)ಗಗನ ಯಾತ್ರೆ ಮಾಡಿದ ಮೊದಲ ಭಾರತದ ಮಹಿಳೆ.
ಉತ್ತರ:: *ಡಾ. ಕಲ್ಪನಾ ಚಾವ್ಲ.*
28)ವಾಯು ಸೇನೆಯ ಪ್ರಥಮ ಮಹಿಳಾ ಏರ್ ಮಾರ್ಶೆಲ್.
ಉತ್ತರ:: *ಪದ್ಮಾವತಿ ಬಂಡಾಪಾಧ್ಯಾಯ.*
29)ಒಲಂಪಿಕ್ಸ್ ಪಂದ್ಯದಲ್ಲಿ ಪದಕ ಪಡೆದ ಮೊದಲ ಭಾರತದ ಮಹಿಳೆ.
ಉತ್ತರ:: *ಕರಣ್ಮ್ ಮಲ್ಲೇಶ್ವರಿ*.
30)ಭಾರತದ ಪ್ರಥಮ ಮಹಿಳಾ ಲಾಕಸಭಾಧ್ಯಕ್ಷರು.
ಉತ್ತರ:: *ಶ್ರೀಮತಿ ಮೀರಾ ಕುಮಾರ*

Monday 11 June 2018

ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು

*WMO : ವಿಶ್ವ ಹವಾಮಾನ ಸಂಸ್ಥೆ*✍

*ವಿಸ್ತೃತ ರೂಪ:  (World Meteorological Organization)*

*ಕೇಂದ್ರ ಕಾರ್ಯಾಲಯ : ಜಿನೀವಾ, ಸ್ವಿಜರ್ಲ್ಯಾಂಡ್  (Geneva, Switzerland)*

*ಪ್ರಸ್ತುತ ಮುಖ್ಯಸ್ಥರು: ಅಲೆಕ್ಸಾಂಡರ್ ಬೆಡ್*
━━━━━━━━━━━━━━━━━━━━
*🌓WIPO : ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ*

*ವಿಸ್ತೃತ ರೂಪ—:  World Intellectual Property Organization*

*ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್  (Geneva, Switzerland)*

*ಪ್ರಸ್ತುತ ಮುಖ್ಯಸ್ಥರು:— ಫ್ರಾನ್ಸಿಸ್ ಗರ್ರಿ (Francis Gurry)*

*ಸ್ಥಾಪನೆಗೊಂಡಿದ್ದು :  1974 ರಲ್ಲಿ.*
━━━━━━━━━━━━━━━━━━━━
*🌓 WHO :  ವಿಶ್ವ ಆರೋಗ್ಯ ಸಂಸ್ಥೆ*

*ವಿಸ್ತೃತ ರೂಪ:—  World Health Organization*

*ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್  (Geneva, Switzerland)*

*ಪ್ರಸ್ತುತ ಮುಖ್ಯಸ್ಥರು:— ಮಾರ್ಗರೇಟ್ ಚಾನ್ (Margaret Chan)*

*ಸ್ಥಾಪನೆಗೊಂಡಿದ್ದು :—  1948 ರಲ್ಲಿ.*
━━━━━━━━━━━━━━━━━━━━
*🌓WFP:—  ವಿಶ್ವ ಆಹಾರ ಕಾರ್ಯಕ್ರಮ.*✍

*ವಿಸ್ತೃತ ರೂಪ:—  World Food Programme*

*ಕೇಂದ್ರ ಕಾರ್ಯಾಲಯ:— ಇಟಲಿಯ ರೋಮ್ (Rome, Italy)*

*ಪ್ರಸ್ತುತ ಮುಖ್ಯಸ್ಥರು:—  ಜೋಸೆಟ್ ಷೀರನ್ (Josette Sheeran)*

*ಸ್ಥಾಪನೆಗೊಂಡಿದ್ದು :—  1963 ರಲ್ಲಿ.*
━━━━━━━━━━━━━━━━━━━━
*🌓WB :  ವಿಶ್ವ ಬ್ಯಾಂಕ್*

*ವಿಸ್ತೃತ ರೂಪ:—  World Bank*✍

*ಕೇಂದ್ರ ಕಾರ್ಯಾಲಯ:—  ವಾಷಿಂಗ್ಟನ್, ಡಿ. ಸಿ (Washington, D.C, USA)*

*ಪ್ರಸ್ತುತ ಮುಖ್ಯಸ್ಥರು:—  ರಾಬರ್ಟ್ ಬಿ. ಝೋಲ್ಲಿಕ್  (Robert B. Zoellick)*

*ಸ್ಥಾಪನೆಗೊಂಡಿದ್ದು :—  1945 ರಲ್ಲಿ.*
━━━━━━━━━━━━━━━━━━━━
*🌓 UPU : ವಿಶ್ವ ಅಂಚೆ ಸಂಘ.*✍

*ವಿಸ್ತೃತ ರೂಪ:—  Universal Postal Union*

*ಕೇಂದ್ರ ಕಾರ್ಯಾಲಯ:— ಬರ್ನೆ, ಸ್ವಿಜರ್ಲ್ಯಾಂಡ್.(Berne, Switzerland)*

*ಪ್ರಸ್ತುತ ಮುಖ್ಯಸ್ಥರು:—  ಎಡ್ವರ್ಡ್ ದಯನ್*

*ಸ್ಥಾಪನೆಗೊಂಡಿದ್ದು :—  1947 ರಲ್ಲಿ.*
━━━━━━━━━━━━━━━━━━━━
*🌓UNIDO :— ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ.*✍

*ವಿಸ್ತೃತ ರೂಪ:—  United Nations Industrial Development Organization.*

*ಕೇಂದ್ರ ಕಾರ್ಯಾಲಯ:—  ಆಸ್ಟ್ರಿಯಾದ ವಿಯೆನ್ನಾ (Vienna, Austria)*

*ಪ್ರಸ್ತುತ ಮುಖ್ಯಸ್ಥರು:— ಕಂಡೆಹ್ ಯುಮ್ ಕೆಲ್ಲಾ  (Kandeh Yumkella)*

*ಸ್ಥಾಪನೆಗೊಂಡಿದ್ದು :— 1967 ರಲ್ಲಿ.*
━━━━━━━━━━━━━━━━━━━━
*🌓UNESCO :  ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ*✍

*ವಿಸ್ತೃತ ರೂಪ:—  United Nations Educational, Scientific and Cultural Organization*

*ಕೇಂದ್ರ ಕಾರ್ಯಾಲಯ:—  ಪ್ಯಾರಿಸ್, ಫ್ರಾನ್ಸ್ (Paris, France)*

*ಪ್ರಸ್ತುತ ಮುಖ್ಯಸ್ಥರು:—  ಐರಿನಾ ಬೊಕೊವ  (Irina Bokova)*

*ಸ್ಥಾಪನೆಗೊಂಡಿದ್ದು :—  1946*
━━━━━━━━━━━━━━━━━━━━
*☀️ITU :  ಅಂತರ್ರಾಷ್ಟ್ರೀಯ ದೂರಸಂಪರ್ಕ ಸಂಘ.*

*ವಿಸ್ತೃತ ರೂಪ:— International Telecommunication Union.*

*ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)*

*ಪ್ರಸ್ತುತ ಮುಖ್ಯಸ್ಥರು:— ಹಮದೌನ್ ಟೌರೆ (Hamadoun Touré)*

*ಸ್ಥಾಪನೆಗೊಂಡಿದ್ದು :—  1947 ರಲ್ಲಿ*
━━━━━━━━━━━━━━━━━━━━
*🌓IMF :—  ಅಂತರರಾಷ್ಟ್ರೀಯ ಹಣಕಾಸು ನಿಧಿ*

*ವಿಸ್ತೃತ ರೂಪ:—  International Monetary Fund.*

*ಕೇಂದ್ರ ಕಾರ್ಯಾಲಯ:—  ವಾಷಿಂಗ್ಟನ್, ಡಿ. ಸಿ (Washington, D.C, USA)*

*ಪ್ರಸ್ತುತ ಮುಖ್ಯಸ್ಥರು:-  ಡೊಮಿನಿಕ್ ಸ್ಟ್ರಾಸ್ ಕಾಹ್ನ್ (Dominique Strauss-Kahn)*

*ಸ್ಥಾಪನೆಗೊಂಡಿದ್ದು :—  1945 ರಲ್ಲಿ*
━━━━━━━━━━━━━━━━━━━━
*🌓IMO :—  ಅಂತರರಾಷ್ಟ್ರೀಯ ಸಾಗರೋತ್ತರ ಸಂಘ.*

*ವಿಸ್ತೃತ ರೂಪ:—  International Maritime Organization*

*ಕೇಂದ್ರ ಕಾರ್ಯಾಲಯ—:  ಲಂಡನ್, ಯುನೈಟೆಡ್ ಕಿಂಗ್ಡಮ್  (London, United Kingdom)*

*ಪ್ರಸ್ತುತ ಮುಖ್ಯಸ್ಥರು:—  ಇಪ್ತಿಮಿಯೋಸ್ ಇ. ಮಿಟ್ರೊಪೊಲಸ್  (Efthimios E. Mitropoulos)*

*ಸ್ಥಾಪನೆಗೊಂಡಿದ್ದು :—  1948*
━━━━━━━━━━━━━━━━━━━━
*🌓 ILO :—  ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ.*

*ವಿಸ್ತೃತ ರೂಪ:—  International Labour Organization*

*ಕೇಂದ್ರ ಕಾರ್ಯಾಲಯ:—  ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)*

*ಪ್ರಸ್ತುತ ಮುಖ್ಯಸ್ಥರು:—  ಜುವಾನ್ ಸೊಮಾವಿಯಾ  (Juan Somavía)*

*ಸ್ಥಾಪನೆಗೊಂಡಿದ್ದು :—  1946*
━━━━━━━━━━━━━━━━━━━━
*🌓 IFAD :—  ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ.*

*ವಿಸ್ತೃತ ರೂಪ:—  International Fund for Agricultural Development*

*ಕೇಂದ್ರ ಕಾರ್ಯಾಲಯ:—  ರೋಮ್ ನ ಇಟಲಿ (Rome, Italy)*

*ಪ್ರಸ್ತುತ ಮುಖ್ಯಸ್ಥರು:— ಕನಯೊ ಎಫ್. ವಾಂಝ್ (Kanayo F. Nwanze)*

*ಸ್ಥಾಪನೆಗೊಂಡಿದ್ದು :—  1977*
━━━━━━━━━━━━━━━━━━━━
*🌓 IAEA :—  ಅಂತಾರಾಷ್ಟ್ರೀಯ ಅಣುಶಕ್ತಿ ಆಯೋಗ.*

*ವಿಸ್ತೃತ ರೂಪ:— International Atomic Energy Agency*

*ಕೇಂದ್ರ ಕಾರ್ಯಾಲಯ:—  ಆಸ್ಟ್ರಿಯಾದ ವಿಯೆನ್ನಾ (Vienna, Austria)*

*ಪ್ರಸ್ತುತ ಮುಖ್ಯಸ್ಥರು:—  ಮೊಹಮದ್ ಎಲ್ಬರಾಡೇ (Mohamed ElBaradei)*

*ಸ್ಥಾಪನೆಗೊಂಡಿದ್ದು :—  1957 ರಲ್ಲ*
━━━━━━━━━━━━━━━━━━━━
*🌓FAO :—  ಆಹಾರ ಮತ್ತು ಕೃಷಿ ಸಂಸ್ಥೆ*

*ವಿಸ್ತೃತ ರೂಪ :—  Food and Agriculture Organization.*

*ಕೇಂದ್ರ ಕಾರ್ಯಾಲಯ:—  ರೋಮ್ ನ ಇಟಲಿ (Rome, Italy)*

*ಪ್ರಸ್ತುತ ಮುಖ್ಯಸ್ಥರು:—  ಜಾಕ್ಯೂಸ್ ಡಿಯೋಫ್  (Jacques Diouf)*

*ಸ್ಥಾಪನೆಗೊಂಡಿದ್ದು :—  1945

ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನ

*"ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನ"*✍

*#ಉತ್ತರ_ಭಾರತದ_ನದಿಗಳು:*

*1.ನದಿ :— #ಸಿಂಧೂ (ಇಂಡಸ್ ನದಿ):*

*●.ನದಿಯ ಉಗಮ ಸ್ಥಾನ :— ಮಾನಸ ಸರೋವರ, ಟಿಬೆಟ್*
*●.ಕೊನೆಗೆ ಸೇರುವ ಪ್ರದೇಶ (Drain Into) :— ಪಾಕಿಸ್ತಾನ, ಅರಬ್ಬೀ ಸಮುದ್ರ*
*●.ವ್ಯಾಪ್ತಿ ರಾಜ್ಯಗಳು :—  (ಪಾಕಿಸ್ತಾನ, ಭಾರತ) ಜಮ್ಮು ಕಾಶ್ಮೀರ, ಗುಜರಾತ್*
*●.ಪ್ರಮುಖ ಉಪನದಿಗಳು :— ಝಸ್ಕಾರ್, ರವಿ, ಬಿಯಾಸ್, ಸಟ್ಲೇಜ್, ಚೆನಾಬ್, ಝೀಲಂ*
*●.ಪ್ರಮುಖ ಅಣೆಕಟ್ಟುಗಳು :— ಮಂಗ್ಲಾ ಅಣೆಕಟ್ಟು (ಝೀಲಂ ನದಿ), ತರಬೇಲಾ ಅಣೆಕಟ್ಟು*
*●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ.*
*●.ವಿಶೇಷತೆಗಳು :—*
*1.ಟಿಬೆಟ್ ನಲ್ಲಿ ಸಿಂಧೂ ನದಿಗೆ 'ಸಿಂಘೆ ಕಂಬಾಚ್' ಎಂದು ಕರೆಯುವರು.*
*2.ಸಿಂಧೂ ನದಿಗೆ ಪಾಕಿಸ್ತಾನದಲ್ಲಿ ಸೇರುವ ಉಪನದಿಗಳೆಂದರೆ 'ಜೋದಾಲ್, ಕಾಬೂಲ್, ತಾಚಿ' ಪ್ರಮುಖವಾದವುಗಳು.*

*2.ನದಿ :— #ಗಂಗಾ:*

*●.ನದಿಯ ಉಗಮ ಸ್ಥಾನ :— ಗಂಗೋತ್ರಿ, ಉತ್ತರಾಖಂಡ್*
*●.ಕೊನೆಗೆ ಸೇರುವ ಪ್ರದೇಶ :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.*
*●.ವ್ಯಾಪ್ತಿ ರಾಜ್ಯಗಳು :— ಉತ್ತರಾಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್*
*●.ಪ್ರಮುಖ ಉಪನದಿಗಳು :— ಗೋಮತಿ, ಘಗ್ರಾ, ಗಂಡಕ್, ಕೊಸಿ, ಯಮುನಾ, ಸೊನ್, ಪುಂಪುನ್, ದಾಮೋದರ್, ರಿಹಾಂದ್,ರಾಮಗಂಗಾ, ಬೇಟ್ವಾ,*
*●.ಪ್ರಮುಖ ಅಣೆಕಟ್ಟುಗಳು :— ತೆಹ್ರಿ ಅಣೆಕಟ್ಟು (ಭಾಗೀರಥಿ ನದಿ), ಬನಸಾಗರ್ ಅಣೆಕಟ್ಟು (ಸನ್ ನದಿ)*
*●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾರ್ಬೆಟ್ ರಾಷ್ಟ್ರೀಯ ಪಾರ್ಕ್ (ರಾಮಗಂಗಾ ನದಿ)*
*●.ವಿಶೇಷತೆಗಳು :—  *
*1.ಭಾರತದ ಅತೀ ಉದ್ದವಾದ ನದಿ*
*2.ಪ್ರಪಂಚದ ಅತ್ಯಂತ ದೊಡ್ಡ ನದೀಮುಖಜ ಭೂಮಿಯಾದ 'ಸುಂದರ್ ಬನ್ಸ್' ಗಂಗಾನದಿಯ ಮುಖಜ ಭೂಮಿಯಾಗಿದೆ.*
*3.ದಾಮೋದರ್ ನದಿಯು ಪಶ್ಚಿಮ ಬಂಗಾಳದ ದುಃಖದ ನದಿಯಾಗಿದೆ.*
*4.ಕೊಸಿ ನದಿಯು ಬಿಹಾರದ ದುಃಖದ ನದಿಯಾಗಿದೆ*.

*3.ನದಿ :— #ಬ್ರಹ್ಮಪುತ್ರ:*

*●.ನದಿಯ ಉಗಮ ಸ್ಥಾನ :— (ಮಾನಸ ಸರೋವರ) ಚೆಮಯಂಗ್ ಡಂಗ್, ಟಿಬೆಟ್*
*●.ಕೊನೆಗೆ ಸೇರುವ ಪ್ರದೇಶ (Drain Into) :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.*
*●.ವ್ಯಾಪ್ತಿ ರಾಜ್ಯಗಳು :— ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.*
*●.ಪ್ರಮುಖ ಉಪನದಿಗಳು :— ದಿಬಂಗ್, ದಿಕು, ಕೊಪಿಲಿ, ಬುರ್ಹಿ, ದಿಹಿಂಗ್, ಧನಶ್ರೀ, ತೀಸ್ತಾ, ಲೋಹಿತ್, ಕಮೆಂಗ್, ಮಾನಸ್*
*●.ಪ್ರಮುಖ ಅಣೆಕಟ್ಟುಗಳು :— ಫರಕ್ಕಾ ಬ್ಯಾರೇಜ್ (ಪಶ್ಚಿಮ ಬಂಗಾಳ)*
*●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾಜಿರಂಗಾ ರಾಷ್ಟ್ರೀಯ ಉದ್ಯಾನ (ಬ್ರಹ್ಮಪುತ್ರ ನದಿ)*
*●.ವಿಶೇಷತೆಗಳು :—*
*1. ಈ ನದಿಗೆ ಟಿಬೆಟಿನಲ್ಲಿ 'ಸಾಂಗ್ ಪೋ', 'ಯಾರ್ಲುಂಗ್ ಜಾಂಗ್ಬೋ ಜಿಯಾಂಗ್' ಹೆಸರಿನಿಂದ ಕರೆಯುತ್ತಾರೆ.*
*2.. ಅರುಣಾಚಲ ಪ್ರದೇಶವನ್ನು ಪ್ರವೇಶಿಸುವ ಮೂಲಕ ಭಾರತಕ್ಕೆ ಪ್ರವೇಶಿಸುತ್ತದೆ. ಆ ಪ್ರವೇಶಿಸುವ ಭಾಗವನ್ನು 'ಡಿಹಾಂಗ್ ಕಂದರ' ಎನ್ನುವರು.*
*3. ಈ ನದಿ ಆಸ್ಸಾಂ ರಾಜ್ಯದ ದುಃಖದ ನದಿಯಾಗಿದೆ.*
*4.ಆಸ್ಸಾಂ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯಲ್ಲಿ 'ಮಜೂಲಿ ಎಂಬ ಅಂತರ ನದಿ ದ್ವೀಪವಿದ್ದು, ಇದು ಪ್ರಪಂಚದ ಅತ್ಯಂತ ದೊಡ್ಡ ಅಂತರ ನದಿ ದ್ವೀಪ ವ್ಯವಸ್ಥೆಯಾಗಿದೆ.*
*5.ತ್ಸಾಂಗ್ ಪೋ ನದಿಗೆ ಟಿಬೆಟಿನ ಕಣ್ಣೀರಿನ ನದಿ ಎನ್ನುವರು.*

*4..ನದಿ :— #ಯಮುನಾ:*

*●.ನದಿಯ ಉಗಮ ಸ್ಥಾನ :— ಯಮುನೋತ್ರಿ, ಉತ್ತರಾಖಂಡ್.*
*●.ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ.*
*●.ವ್ಯಾಪ್ತಿ ರಾಜ್ಯಗಳು :— ಉತ್ತರ ಪ್ರದೇಶ, ಹರಿಯಾಣ & ಉತ್ತರಾಖಂಡ್,*
*●.ಪ್ರಮುಖ ಉಪನದಿಗಳು :— ಹಿಂದೊನ್, ಕೆನ್, ಚಂಬಲ್, ಬೇತ್ವಾ, ಸಿಂಧ್, ಟೊನ್ಸ್.*
*●.ಪ್ರಮುಖ ಅಣೆಕಟ್ಟುಗಳು :— ಗಾಂಧಿ ಸಾಗರ ಅಣೆಕಟ್ಟು (ಚಂಬಲ್), ರಾಣಾ ಪ್ರತಾಪ್ ಸಾಗರ ಅಣೆಕಟ್ಟು (ಚಂಬಲ್),*
*●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಪನ್ನಾ ರಾಷ್ಟ್ರೀಯ ಉದ್ಯಾನ (ಕೆನ್ ನದಿ)*
*●.ವಿಶೇಷತೆಗಳು :— *
*1. ಭಾರತದ ಅತ್ಯಂತ ಉದ್ದವಾದ ಉಪನದಿ (ಗಂಗಾ)*
*5..ನದಿ :— ಸಬರಮತಿ*
*●.ನದಿಯ ಉಗಮ ಸ್ಥಾನ :— ಉದಯಪುರ್,  ರಾಜಸ್ಥಾನ .*
*●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ.*
*●.ವ್ಯಾಪ್ತಿ ರಾಜ್ಯಗಳು :— ಗುಜರಾತ್, ರಾಜಸ್ಥಾನ*
*●.ಪ್ರಮುಖ ಉಪನದಿಗಳು :— ವಕಾಲ್, ಸೇಯ್ ನಾಡಿ, ಮಧುಮತಿ, ಹರ್ನಾವ್, ಹಾಥ್ ಮತಿ*
*●.ಪ್ರಮುಖ ಅಣೆಕಟ್ಟುಗಳು :— ಧರೋಯಿ ಅಣೆಕಟ್ಟು*

*★ ದಕ್ಷಿಣ ಭಾರತದ ನದಿಗಳು:*

*1.ನದಿ :— #ಕೃಷ್ಣಾ*

*(ದ.ಭಾರತದ ಪೂರ್ವಕ್ಕೆ ಹರಿಯುವ ನದಿ)*
*●.ನದಿಯ ಉಗಮ ಸ್ಥಾನ :— ಮಹಾರಾಷ್ಟ್ರದ ಮಹಾಬಲೇಶ್ವರ.*
*●.ಕೊನೆಗೆ ಸೇರುವ ಪ್ರದೇಶ :— ಬಂಗಾಳ ಕೊಲ್ಲಿ (ಆಂಧ್ರಪ್ರದೇಶ)*
*●.ವ್ಯಾಪ್ತಿ ರಾಜ್ಯಗಳು :— ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್*ರ
*●.ಪ್ರಮುಖ ಉಪನದಿಗಳು :— ತುಂಗಭದ್ರ, ಕೊಯ್ನ, ಘಟಪ್ರಭಾ, ಮಲಪ್ರಭಾ, ಭೀಮಾ, ದಿಂಡಿ, ಯೆರ್ಲಾ, ವರ್ಣಾ, ಪಂಚಗಂಗಾ, ಧೂದಗಂಗಾ, ದೋಣಿ ಮತ್ತು ಮುಸಿ.*
*●.ಪ್ರಮುಖ ಅಣೆಕಟ್ಟುಗಳು :— ನಾಗಾರ್ಜುನ ಸಾಗರ* *ಜಲಾಶಯ, ಶ್ರೀಶೈಲಂ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು, ಧೋಮ್ ಅಣೆಕಟ್ಟು*
*●.ವಿಶೇಷತೆಗಳು :—*
*ಇದು ದಕ್ಷಿಣ ಭಾರತದ 2 ನೇ ಅತಿ ಉದ್ದವಾದ ಮತ್ತು ಪ್ರಸ್ಥಭೂಮಿಯಲ್ಲಿ ಗೋದಾವರಿ ನದಿಯ ನಂತರದ 2 ನೇ ಅತಿ ದೊಡ್ಡ ನದಿ.*

*2. ನದಿ :— #ನರ್ಮದಾ (ರೇವಾ)*

*(ದ.ಭಾರತದ ಪಶ್ಚಿಮಕ್ಕೆ ಹರಿಯುವ ನದಿ)*

*●.ನದಿಯ ಉಗಮ ಸ್ಥಾನ :— ಅಮರಕಂಟಕ್, ಮಧ್ಯಪ್ರದೇಶ*
*●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ (ಗುಜರಾತ್)*
*●.ವ್ಯಾಪ್ತಿ ರಾಜ್ಯಗಳು :— ಮಧ್ಯ ಪ್ರದೇಶ, ಮಹಾರಾಷ್ಟ್ರ ಗುಜರಾತ್*
*●.ಪ್ರಮುಖ ಉಪನದಿಗಳು :— ಶೇರ್, ಶಕ್ಕರ್, ದುಧಿ, ತವಾ, ಹಿರನ್, ಬರ್ನ, ಚೊರಲ್, ಕರಮ್*
*●.ಪ್ರಮುಖ ಅಣೆಕಟ್ಟುಗಳು :— ಸರ್ದಾರ್ ಸರೋವರ್ (ಗುಜರಾತ್), ನರ್ಮದಾ ಸಾಗರ್ (ಮಧ್ಯಪ್ರದೇಶ)*
*●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕನ್ಹಾ ರಾಷ್ಟ್ರೀಯ ಉದ್ಯಾನ (ಸುರ್ಪನ್ ನದಿ)*
*●.ವಿಶೇಷತೆಗಳು :—*
*1. ಭಾರತೀಯ ಉಪಖಂಡದಲ್ಲಿ ಹರಿಯುವ 5ನೇ ಉದ್ದದ ನದಿ.*
*2.ಇದು ಪಶ್ಚಿಮಕ್ಕೆ ಹರಿಯುವ ಉದ್ದವಾದ ನದಿ

ಓದಬೇಕಾದ ವಿಷಯಗಳು- ಅದಕ್ಕೆ ಸಂಬಂಧಿಸಿದ ಇತ್ತೀಚಿನ ಘಟನೆಗಳು*

*ಓದಬೇಕಾದ ವಿಷಯಗಳು- ಅದಕ್ಕೆ ಸಂಬಂಧಿಸಿದ ಇತ್ತೀಚಿನ ಘಟನೆಗಳು*

1-ಕೊರೆಗಾವ್ ಯುದ್ಧ- 200 ನೇ ವಾರ್ಷಿಕೋತ್ಸವ

2-ಪೈಕಾ ಚಳವಳಿ-  ಸ್ವಾತಂತ್ರ್ಯದ ಮೊದಲ ಯುದ್ಧ-1817 - ಓಡಿಸ್ಸಾ

3-ಕ್ವಿಟ್ ಇಂಡಿಯಾ ಚಳವಳಿ- 75 ನೇ ವಾರ್ಷಿಕೋತ್ಸವ

4-ಸಬರಮತಿ ಆಶ್ರಮ- ಶತಮಾನೋತ್ಸವ

5-ಬೆಂಗಾಲಿ ಪತ್ರಿಕೆ- ಎರಡು ನೂರರ ಸ್ಮರಣಾರ್ಥ

6-ಚಂಪಾರಣ್ಯ ಚಳವಳಿ- ಶತಮಾನೋತ್ಸವ

7-ರಾಜಾರಾಮ ಮೋಹನ್ ರಾಯ- 245 ಜನ್ಮದಿನ

8-ಶ್ರೀ ರಾಮಾನುಜಾಚಾರ್ಯ-  1000 ನೇ ಜನ್ಮ ವಾರ್ಷಿಕೋತ್ಸವ

9- ಅನಸುಯ್ಯ ಸಾರಾಭಾಯಿ. - ಗೂಗಲ್ ( ಡೂಡಲ್) 132 ನೇ ಜನ್ಮದಿನೋತ್ಸವವನ್ನು ಆಚರಿಸಿಕೊಂಡಿತು

ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ👆👆

ಪ್ರಮುಖ ಕಾರ್ಯಾಚರಣೆಗಳು

ಪ್ರಮುಖ ಕಾರ್ಯಾಚರಣೆಗಳು

Q1.ಆಪರೇಷನ್ ವಿಜಯ್ ಕಾರ್ಯಾಚರಣೆ ಸಂಬಂಧಿಸಿದ್ದು?
ಕಾರ್ಗಿಲ್

Q2.ಆಪರೇಷನ್ ಸೇಪಡ ಸಾಗರ?
ಕಾರ್ಗಿಲ್ ಯುದ್ಧ ದಲ್ಲಿ ವಾಯುಪಡೆ ಕೈಗೊಂಡ ಕಾರ್ಯಾಚರಣೆ

Q3.ಆಪರೇಷನ್ ಭದ್ರ ಕಾರ್ಯಾಚರಣೆ?
ಕಾರ್ಗಲ್ ಯುದ್ಧ ದಲ್ಲಿ ಪಾಕ್ ಕೈಗೊಂಡ ಕಾರ್ಯಾಚರಣೆ

Q4.ಆಪರೇಷನ್ ಟ್ರೈಡೆಂಟ್?
1972 ಭಾರತ/ ಪಾಕಿಸ್ತಾನ ಯುದ್ಧದಲ್ಲಿ ಭಾರತದ ನೌಕಾಪಡೆ ಕೈಗೊಂಡ ಕಾರ್ಯಾಚರಣೆ

Q5.ಆಪರೇಷನ್ ಬ್ಲಾಕ್ ಥಂಡರ?
1986 apr 30 ಸುವರ್ಣ ಮಂದಿರ ದ ಮೇಲೆ ದಾಳಿ

Q6.ಆಪರೇಷನ್ ಬ್ಲಾಕ್ ಟಾನ್ರಾಡೋ?
nov 26.2008. NSG ಪಡೆ ಭಯೋತ್ಪಾದಕರು ವಿರುದ್ಧ ಕೈಗೊಂಡ ಕಾರ್ಯಾಚರಣೆ

Q7.ಆಪರೇಷನ್ ನೇಪ್ಚೊನಸ್ಪಿಯರ ?
ಒಸಮಾ ಬಿನ್ ಲಾಡೆನ್ ಹತ್ಯೆಗೆ ಕೈಗೊಂಡ ಕಾರ್ಯಾಚರಣೆ

Q8.ಆಪರೇಷನ್ ರಾಹತ್?
ಭಾರತೀಯ ವಾಯುಪಡೆ ಉತ್ತರಖಂಡದಲ್ಲಿ ಕೈಗೊಂಡ ಕಾರ್ಯಾಚರಣೆ

Q9.ಆಪರೇಷನ್ ಮೇಘದೂತ?
1984ರಲ್ಲಿ ಸಿಯಾಚಿನ್ ವಶಪಡಿಸಿಕೊಂಡಿದ್ದು

Q10.ಆಪರೇಷನ್ ದುರ್ಯೋಧನ ?
14ನೇ ಲೋಕ ಸಭೆಯಲ್ಲಿ 11 ಮಂದಿ ಸಂಸದರು ಪ್ರಶ್ನೇ ಕೇಳಲು ಲಂಚ ಸ್ವೀಕರಿಸಿದ ಪ್ರಕರಣ,

Q11.ಆಪರೇಷನ್ ಮದಾದ್?
ಭಾರತೀಯ ನೌಕಾಪಡೆ ತಮಿಳುನಾಡಿನಲ್ಲಿ ಸುನಾಮಿ ಉಂಟಾದಾಗ ಕೈಗೊಂಡ ಕಾರ್ಯಾಚರಣೆ

Q12.ಆಪರೇಷನ್ ಗ್ರೀನ್ ಹಂಟ್?
2009 ನಕ್ಸಲ್ ಹಾವಳಿ ನಿಯಂತ್ರಿಸಲು

Q13.ಆಪರೇಷನ್ ಕ್ಯಾಕ್ಟಸ್
1988ರಲ್ಲಿ ಭಾರತೀಯ ವಾಯುಪಡೆ & ಮಾಲ್ಡಿವ್ಸ ಸರ್ಕಾರ ಬಂಡುಕೋರರ ವಿರುದ್ಧ ಕೈಗೊಂಡ ಕಾರ್ಯಾಚರಣೆ

Q14.ಆಪರೇಷನ್ ಓಶನ್ ಶಿಲ್ಡ?
2009 ರಿಂದ ನ್ಯಾಟೋ ಪಡೆ ಸೋಮಾಲಿಯಾ ಬಂಡುಕೋರರ ವಿರುದ್ಧ ಕೈಗೊಂಡ ಕಾರ್ಯಾಚರಣೆ

Q15.ಆಪರೇಷನ್ ಬ್ಲೂಸ್ಟಾರ್ ?
ಸುವರ್ಣ ಮಂದಿರದ ಮೇಲಿನ ದಾಳಿ ಹತ್ತಿಕ್ಕಲು

2018ನೇ ಸಾಲಿನ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

▬▬▬▬▬ஜ۩۞۩ஜ▬▬▬▬▬
*👁‍🗨2018ನೇ ಸಾಲಿನ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ;*
▬▬▬▬▬ஜ۩۞۩ஜ▬▬▬▬▬ 

*🎙2018ನೇ ಸಾಲಿನ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ , ಖ್ಯಾತ ನಿರ್ದೇಶಕ ಶೇಖರ್​ ಕಪೂರ್​ ಪ್ರಶಸ್ತಿ ಗಳನ್ನು ಘೋಷಣೆ ಮಾಡಿದ್ದಾರೆ.*
▬▬▬▬▬ஜ۩۞۩ஜ▬▬▬▬▬

*👉ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ವಿನೋದ್ ಖನ್ನಾ(ಮರಣೊತ್ತರವಾಗಿ)*
▬▬▬▬▬ஜ۩۞۩ஜ▬▬▬▬▬

*👉ಅತ್ಯುತ್ತಮ ಚಿತ್ರ : ವಿಲೇಜ್ ರಾಕ್‌ಸ್ಟಾರ್ಸ್ (ಅಸ್ಸಾಮಿ)*
▬▬▬▬▬ஜ۩۞۩ஜ▬▬▬▬▬

*👉ಅತ್ಯುತ್ತಮ ಹಿಂದಿ ಚಿತ್ರ : ನ್ಯೂಟನ್*
▬▬▬▬▬ஜ۩۞۩ஜ▬▬▬▬▬

*👉ರಾಷ್ಟ್ರೀಯ ಅತ್ಯುತ್ತಮ ನಟ : ರಿದ್ದಿ ಸೇನ್ (ನಗರ್​ ಕೀರ್ತನ್)*

▬▬▬▬▬ஜ۩۞۩ஜ▬▬▬▬▬
*👉ರಾಷ್ಟ್ರೀಯ ಅತ್ಯುತ್ತಮ ನಟಿ : ಶ್ರೀದೇವಿ (ಮಾಮ್)*
▬▬▬▬▬ஜ۩۞۩ஜ▬▬▬▬▬

*👉ಅತ್ಯುತ್ತಮ ಸಂಗೀತ ನಿರ್ದೇಶಕ : ಎ ಆರ್ ರೆಹಮಾನ್ (ಕಾಟ್ರು ವೆಲಿಯದೈ)*
▬▬▬▬▬ஜ۩۞۩ஜ▬▬▬▬▬

*👉ಅತ್ಯುತ್ತಮ ನಿರ್ದೇಶಕ : ಜಯರಾಜ್ (ಭಯಾನಕಮ್)*
▬▬▬▬▬ஜ۩۞۩ஜ▬▬▬▬▬

*👉ಅತ್ಯುತ್ತಮ ಹೋರಾಟ ಸನ್ನಿವೇಶ, ಸ್ಪೆಷಲ್ ಎಫೆಕ್ಟ್ಸ್, ಜನಪ್ರಿಯ ಚಿತ್ರ : ಬಾಹುಬಲಿ-2*
▬▬▬▬▬ஜ۩۞۩ஜ▬▬▬▬▬

*👉ಅತ್ಯುತ್ತಮ ಹಿನ್ನೆಲೆ ಸಂಗೀತ : ಎ ಆರ್ ರೆಹಮಾನ್ (ಮಾಮ್)*
▬▬▬▬▬ஜ۩۞۩ஜ▬▬▬▬▬

*👉ಕನ್ನಡದ ಅತ್ಯುತ್ತಮ ಚಿತ್ರ:-ನಟಿ ತಾರಾ ಅಭಿನಯದ ಹೆಬ್ಬೆಟ್ಟು ರಾಮಕ್ಕ*
▬▬▬▬▬ஜ۩۞۩ஜ▬▬▬▬▬

*👉ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಮಾರ್ಚ್​ 22’ ಚಿತ್ರದ ‘ಮುತ್ತುರತ್ನ’ ಚಿತ್ರದ ಹಾಡಿಗೆ ಕನ್ನಡದ "ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ" ಒಲಿದಿದೆ.*
▬▬▬▬▬ஜ۩۞۩ஜ▬▬▬▬▬

*👉ರಾಜ್​ಕುಮಾರ್​ ರಾವ್​​​​ ನಟನೆಯ ಹಿಂದಿಯ ‘ನ್ಯೂಟನ್​’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ*
▬▬▬▬▬ஜ۩۞۩ஜ▬▬▬▬▬

*👉ತುಳು ಭಾಷೆ ವಿಭಾಗದಲ್ಲಿ “ಪದ್ದಾಯಿ” ಅತ್ಯುತ್ತಮ ಚಿತ್ರವೆಂಬ ಕೀರ್ತಿಗೆ ಪಾತ್ರವಾಗಿದೆ.*
▬▬▬▬▬ஜ۩۞۩ஜ▬▬▬▬▬

*👉ತಮಿಳಿನ ‘ಕಾಟ್ರುವೇಳಿಯಿದೈ’ ಚಿತ್ರದ ಸಂಗೀತ ನಿರ್ದೇಶನ ಹಾಗೂ ‘ಮಾಮ್’​ ಚಿತ್ರದ ಹಿನ್ನೆಲೆ ಸಂಗೀತಕ್ಕೆ ಎ.ಆರ್. ರೆಹಮಾನ್​ ಪ್ರಶಸ್ತಿ ಒಲಿದಿದೆ.*
▬▬▬▬▬ஜ۩۞۩ஜ▬▬▬▬▬

*👉ಬಂಗಾಳಿಯ ನಗರ್​ ರ್ಕೀರ್ತನ್​ ಚಿತ್ರದ ನಟನೆಗಾಗಿ ‘ರಿದ್ಧಿಸೇನ್’​ ಅತ್ಯುತ್ತಮ ಪ್ರಶಸ್ತಿ ಗಳಿಸಿದ್ದಾರೆ.*
▬▬▬▬▬ஜ۩۞۩ஜ▬▬▬▬▬

*👉ಹಿರಿಯ ವಿನೋದ್​ ಖನ್ನಾ ಅವರಿಗೆ, ಮರಣೋತ್ತರ ದಾದಾಸಾಹೇಬ್​ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.*
▬▬▬▬▬ஜ۩۞۩ஜ▬▬▬▬▬

*👉ಬಾಹುಬಲಿ-2 ಚಿತ್ರ ಜನಪ್ರಿಯ ಚಿತ್ರ, ಸ್ಪೆಷಲ್​ ಎಫೆಕ್ಟ್​, ಹೋರಾಟ ಸನ್ನಿವೇಶ ಈ ಮೂರು ವಿಭಾಗಗಳಲ್ಲಿಯೂ ಪ್ರಶಸ್ತಿ ಬಾಚಿಕೊಂಡಿದೆ.*
▬▬▬▬▬ஜ۩۞۩ஜ▬▬▬▬▬

ರಾಷ್ಟೀಯ ಆದಾಯ' ಎಂದರೇನು

☀️  *'ರಾಷ್ಟೀಯ ಆದಾಯ' ಎಂದರೇನು?* *— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್...