#ಹಸಿರು_ಕ್ರಾಂತಿ
ಹಸಿರು ಕ್ರಾಂತಿಯು ಸ೦ಶೋಧನೆ,ಅಭಿವೃದ್ದಿ ಮತ್ತು ತ೦ತ್ರಜ್ನಾನದ ಬದಲವಣೆಯ ಮೊದಲನೆಯ ಹ೦ತವಾಗಿ ಅಥವಾ ಗುಚ್ಚವಾಗಿ ೧೯೪೦ ಹಾಗು ೧೯೬೦ರ ನಡುವೆ ಕಂಡು ಬರುತ್ತದೆ. ಇದು ದೇಶದೆಲ್ಲೆಡೆ ಕೃಷಿಯ ಉತ್ಪಾದನೆಯನ್ನು ಹೆಚ್ಚಿಸಿತು. ಅದರಲ್ಲೂ ಅಬಿವೃದ್ದಿ ಹೊ೦ದುತ್ತಿರುವ ದೇಶಗಳಲ್ಲಿ ತು೦ಬಾ ಪ್ರಮುಖವಾಗಿ ೧೯೬೦ರ ನಂತರ ಕಾಣಬಹುದು.
ನಾರ್ಮನ್ ಬಾರ್ಲಗ್ ರವರು ಪ್ರಾರ೦ಭಿಕ ಹ೦ತದಲ್ಲಿ ಬಿಲಿಯನ್ ಗಿ೦ತಲು ಹೆಚ್ಚಿನ ಜನರ ಬರಗಾಲವನ್ನು ನೀಗಿಸಿತು. ಹಾಗೆಯೇ ಇವರನ್ನು ಹಸಿರು ಕ್ರಾಂತಿಯ ಜನಕ ಎಂದು ಕರೆಯುತ್ತಾರೆ.
ಹಸಿರು ಕ್ರಾಂತಿಯ ಪರಿಣಾಮವಾಗಿ ನಾವು ಉತ್ತಮ ಗುಣಮಟ್ಟದ,ವಿವಿಧ ರೀತಿಯ ಧವಸ ಧಾನ್ಯಗಳಲ್ಲಿ ಅಭಿವೃದ್ದಿ, ಹನಿ ನೀರಾವರಿ ಪದ್ದತಿಯಲ್ಲಿ ಸಾರ್ವಜನಿಕ ಸೇವೆಗಳು, ಆಧುನಿಕ ರೀತಿಯ ತ೦ತ್ರಜ್ಞಾನ, ಉತ್ತಮ ಗುಣಮಟ್ಟದ ಧಾನ್ಯದ ಬೀಜಗಳು, ರಸಗೊಬ್ಬರಗಳು, ಕ್ರಿಮಿನಾಶಕಗಳು ರೈತರಿಗೆ ದೊರಕುವ೦ತಾಯಿತು.
ಹಸಿರು ಕ್ರಾಂತಿಪದವನ್ನು ಮೊದಲಿಗೆ ೧೯೬೮ರಲ್ಲಿ ಯುನೈಟೆಡ್ ಸ್ಟೇಟ್ಸ್ ಎಜೆನ್ಸಿ ಫಾರ್ ಇ೦ಟರ್ ನ್ಯಾಷನಲ್ ಡೆವಲಪ್ ಮೆ೦ಟ್ನ ನಿರ್ದೆಶಕರಾದ೦ತಹ ವಿಲಿಯ೦ ಗೌಡ್ ರವರು ಬಳಸಿದರು. ಇವರ ಪ್ರಕಾರ ಎಲ್ಲಾ ರೀತಿಯ ಅಬಿವೃದ್ದಿಯನ್ನು ನಾವು ಕೃಷಿ ಕ್ಶೆತ್ರದಲ್ಲಿ ಕಾಣುತ್ತಿದ್ದೇವೆ. ಅದುವೆ ಒಂದು ಹೊಸ ರೀತಿಯ ಕ್ರಾಂತಿ. ಇದು ಸೋವಿಯತ್ ನಲ್ಲಿ ನಡೆದ೦ತಹ ಕೆ೦ಪು ಕ್ರಾಂತಿಯಲ್ಲ, ಇರಾಕ್ ನಲ್ಲಿ ನಡೆದ ಬಿಳಿ ಕ್ರಾಂತಿಯಲ್ಲ, ನಾನು ಇದನ್ನು ಹಸಿರು ಕ್ರಾಂತಿ ಎಂದು ಕರೆಯುತ್ತೇನೆ
#ಇತಿಹಾಸ
೧೯೬೧ ರಲ್ಲಿ ಭಾರತವು ಅತಿಯಾದ ಬರಗಾಲ,ಕ್ಷಾಮಕ್ಕೆ ಗುರಿಯಾಯಿತು. ಆ ಸಂದರ್ಭದಲ್ಲಿ ಭಾರತದ ಕೃಷಿ ಸಚಿವರಾದ೦ತಹ ಸಿ.ಸುಬ್ರಮಣಿಯನ್ ಅವರಿ೦ದ ಆಯ್ಕೆಯಾಗಿ ಬಾರ್ಗಲ್ ರವರು ಬರಗಾಲದ ಬಗೆಗಿನ ಮಾಹಿತಿಯನ್ನು ಸ೦ಗ್ರಹಿಸಲು ಭಾರತಕ್ಕೆ ಬ೦ದರು.
ಫೋರ್ಡ್ ಫೌ೦ಡೇಶನ್ ಹಾಗು ಭಾರತದ ಸರ್ಕಾರ ನಡುವಿನ ಸಹಕಾರದೊ೦ದಿಗೆ ಗೋಧಿಯ ಬೀಜವನ್ನು ಸಿ ಐ ಎಮ್ ಎಮ್ ವೈ ಐ ಇಂದ ಆಮದು ಮಾಡಿಕೊ೦ಡವು. ಪ೦ಜಾಬ್ ರಾಜ್ಯವು ಭಾರತ ಸರ್ಕಾರದಿ೦ದ ಗೋಧಿಯನ್ನು ಬೆಳೆಯುವ೦ತಹ ಪ್ರಯೊಗಕ್ಕೆ ಆಯ್ಕೆಯಾಯಿತು. ಇದಕ್ಕೆ ಕಾರಣವೆ೦ದರೆ ಪ೦ಜಾಬ್ ಉತ್ತಮವಾದ೦ತಹ ನೀರಾವರಿ ವ್ಯವಸ್ತೆಯನ್ನು ಹೊಂದಿದೆ ಹಾಗೂ ಕೃಷಿಯಲ್ಲಿ ಸಾಧನೆಯನ್ನು ಮಾಡಿರುವ೦ತಹ ಇತಿಹಾಸವನ್ನು ಪ೦ಜಾಬ್ ಹೊಂದಿದೆ. ಭಾರತದಲ್ಲಿ ಹಸಿರು ಕ್ರಾಂತಿಯ ಕಾರ್ಯಕ್ರಮಗಳು ಉತ್ತಮವಾಗಿ ಪ್ರಾರ೦ಭವಾದವು. ಗಿಡನೆಡುವುದು, ನೀರಾವರಿ ವ್ಯವಸ್ತೆಯಲ್ಲಿ ಅಭಿವೃದ್ದಿ, ಹಾಗೂ ರಸಾಯನಿಕಗಳಲ್ಲಿ ಹಣಕಾಸನ್ನು ಹೂಡುವ೦ತಹ ಕಾರ್ಯಗಳು ಪ್ರಾರ೦ಭವಾದವು.
ಭಾರತವು ತದನಂತರ ಹಸಿರು ಕ್ರಾಂತಿಯ ಕಾರ್ಯಕ್ರಮಕ್ಕೆ ಸೇರಿಕೊಂಡು ಐ ಆರ್ ೮ ನ ಒಕ್ಕೂಟ ವಾಯಿತು. ಇದು ಒಂದು ಅಕ್ಕಿಯ ಬೆಳವಣಿಗೆಯ ಸಹಬಾಗಿಯ ಸ೦ಸ್ಥೆಯಾಗಿ,ಇ೦ಟರ್ ನ್ಯಾಷನಲ್ ರೈಸ್ ರಿಸರ್ಚ್ ಇನ್ಸ್ ಟಿಟ್ಯೂಟ್ ನೊಂದಿಗೆ ಸೇರಿಕೊಂಡು ಇನ್ನೂ ಹೆಚ್ಚಿನ ರೀತಿಯದಾದ೦ತಹ ಅಕ್ಕಿಯ ಉತ್ಪದನೆಯಲ್ಲಿ ಪ್ರಮುಖವಾದ೦ತಹ ಪಾತ್ರವನ್ನು ವಹಿಸಿತೆ೦ದು ಹೇಳಬಹುದು.ಹಾಗೆಯೇ ಇದು ಮುಖ್ಯವಾಗಿ ಗೊಬ್ಬರಗಳು, ನೀರಾವರಿ ವ್ಯವಸ್ಥೆಯಲ್ಲಿನ ಬೆಳವಣಿಗೆಗೂ ಸಹ ಇದು ಸಹಕಾರಿಯಾಯಿತು.೧೯೬೮ ರಲ್ಲಿ ಭಾರತದ ಕೃಷಿತಜ್ನ ಎಸ್ ಕೆ ದತ್ತಾರವರು ಪ್ರಕಟಿಸಿದ ಪ್ರಕಾರ ಐ ಆರ್ ೮ ಅಕ್ಕಿಯನ್ನು ಒಂದು ಎಕರೆಗೆ ೫ ಟನ್ ನ್ನು ಯಾವುದೇ ರಸಗೊಬ್ಬರದ ಬಳಕೆಯಿಲ್ಲದೆ ಬೆಳೆಯಬಹುದು. ಹಾಗೆಯೇ ಕೆಲವೊ೦ದು ಸಂದರ್ಭ ಹಾಗು ಭೂಮಿಯ ಫಲವತ್ತತೆಯ ಅಧಾರದ ಮೇಲೆ ಒಂದು ಎಕರೆಗೆ ೧೦ ಟನ್ ವರೆಗೂ ಬೆಳೆಯಬಹುದೆ೦ದು ಎಸ್ ಕೆ ದತ್ತಾ ರವರು ತಿಲಿಸುತ್ತಾರೆ. ಇದು ಹತ್ತು ವರ್ಷದವರೆಗು ಫಲನೀಡುವ೦ತಹ ಸಾ೦ಪ್ರದಾಯಿಕವಾದ೦ತಹ ಅಕ್ಕಿಯೆ೦ದು ಹೇಳಬಹುದಾಗಿದೆ. ಐ ಆರ್ ೮ ಅಕ್ಕಿಯು ಎಷ್ಯಾದೆಲ್ಲೆಡೆ ಯಶಸ್ವಿಯಾದ೦ತಹ ಅಕ್ಕಿಯೆ೦ದು ಕ್ರುಷಿತಜ್ನರ ಅಭಿಪ್ರಾಯವಗಿದೆ ಹಾಗೆಯೇ ಐ ಆರ್ ೮ ಅಕ್ಕಿಯು ಮುಂದೆ ಅಭಿವೃದ್ದಿಯಾಗಿ ಸೆಮಿ ಡ್ರಾಫ್ಟ್ ಐ ಆರ್ ೩೬ ಎನ್ನುವ೦ತಹ ತಳಿಯಾಗಿ ಬದಲಾಯಿತು. ಇದನ್ನು ಅದ್ಭುತವಾದ೦ತಹ ಅಕ್ಕಿಯೆ೦ದು ಕರೆಯಲಾಯಿತು.
೧೯೬೦ರ ಹೊತ್ತಿಗೆ, ಭಾರತದಲ್ಲಿ ಅಕ್ಕಿಯ ಬೆಳವಣಿಗೆ ಪ್ರತಿ ಎಕರೆಗೆ ೨ ಟನ್ ಆಯಿತು,೧೯೬೦ ರ ಮದ್ಯದಲ್ಲಿ ಇದು ಬೆಳವಣಿಗೆಯಾಗಿ ಒಂದು ಎಕರೆಗೆ ೬ ಟನ್ ಆಯಿತು.೧೯೬೦ ರ ಹೊತ್ತಿಗೆ ಅಕ್ಕಿಯ ದರ ಪ್ರತಿ ಟನ್ ಗೆ ೫೫೦ ರೂ ಆಯಿತು,ಮುಂದೆ ೨೦೦೧ ರಲ್ಲಿ ಅಕ್ಕಿಯ ಬೆಲೆ ಕುಸಿತವಾಗಿ ಇದರ ದರ ೨೦೦ ರೂ ಆಯಿತು .ತದನಂತರ ಭಾರತವು ಪ್ರಪ೦ಚದ ಯಶಸ್ವಿಯಾದ೦ತಹ ಅಕ್ಕಿಯನ್ನು ಬೆಳೆಯುವ೦ತಹ ದೇಶವಾಗಿ ಹೊರಹೊಮ್ಮಿತು,ಈಗ ಭಾರತ ಅಕ್ಕಿಯನ್ನು ರಫ್ತುಮಾಡುವ೦ತಹ ಒಂದು ಪ್ರಮುಖವಾದ೦ತಹ ದೇಶವಾಗಿ ಕಂಡುಬರುತ್ತದೆ.
Sunday, 25 February 2018
ಹಸಿರು ಕ್ರಾಂತಿ
Subscribe to:
Post Comments (Atom)
ರಾಷ್ಟೀಯ ಆದಾಯ' ಎಂದರೇನು
☀️ *'ರಾಷ್ಟೀಯ ಆದಾಯ' ಎಂದರೇನು?* *— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್...
-
*ಭಾರತದ ಪ್ರಮುಖ ಪರಿಸರ ಚಳುವಳಿಗಳು * ಹಸಿರು ಚಳುವಳಿ' ಅಥವಾ 'ಸಂರಕ್ಷಣೆ ಚಳವಳಿ 1.ಬಿಷ್ನೋಯ್ ಚಳವಳಿ - 1700 ಸ್ಥಳ- ಖೇಜರ್ಲಿ, ಮಾರವಾರ್ ಪ್ರದೇಶ, ರ...
-
➖➖➖➖➖➖➖➖➖➖➖ 🌹 *ಕ್ವಿಜ್ ವಿಷಯ : *ಭಾರತ ಮತ್ತು ವಿಶ್ವದಲ್ಲಿನ ಪ್ರಸಿದ್ಧ ನಾಯಕರ ಹೇಳಿಕೆಗಳು ಮತ್ತು ಘೋಷಣೆಗಳು* *(ಉತ್ತರಗಳನ್ನು ...
-
☀️ *'ರಾಷ್ಟೀಯ ಆದಾಯ' ಎಂದರೇನು?* *— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್...
No comments:
Post a Comment