#ಭಾರತದಲ್ಲಿ #ಯುದ್ಧಕಾಲದಲ್ಲಿ #ನೀಡಲಾಗುವ #ಅತ್ಯುನ್ನತ #ಸೇನಾ #ಪುರಸ್ಕಾರಗಳು*
🥇🥇🥇🥇🥇🥇🥇
*ಪರಮ ವೀರ ಚಕ್ರ ಭಾರತ ಸೇನೆಯ ಶೌರ್ಯ ಪುರಸ್ಕಾರ. ಯುದ್ಧದ ವೇಳೆ ಅಪ್ರತಿಮ ಸಾಧನೆ ಮಾಡಿದವರಿಗೆ ಸಲ್ಲುವ ಪ್ರಶಸ್ತಿ. ಭಾರತದ ಅತ್ಯುಚ್ಚ ಸೇನಾ ಪುರಸ್ಕಾರ. ಸಂಸ್ಕೃತದಲ್ಲಿ ಇದರ ಅರ್ಥ ಶೂರರಲ್ಲಿ ಶೂರ ಎಂದು.*
🥈🥈🥈🥈🥈🥈
*ಮಹಾ ವೀರ ಚಕ್ರ ಭಾರತದ ಎರಡನೇ ಅತಿ ದೊಡ್ಡ ಸೇನಾ ಪುರಸ್ಕಾರವಾಗಿದೆ. ಇದು ಶತ್ರುವಿನ ಇರುವಿಕೆಯಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿದ ಸೈನಿಕರಿಗೆ ಸಲ್ಲುತ್ತದೆ. ಈ ಪುರಸ್ಕಾರವನ್ನು ಮರಣೋತ್ತರವಾಗಿಯೂ ಕೊಡಬಹುದಾಗಿದೆ.*
🥉🥉🥉🥉
*ವೀರ ಚಕ್ರವು ಭಾರತದ ಶೌರ್ಯ ಪುರಸ್ಕಾರವಾಗಿದ್ದು ಯುದ್ಧಭೂಮಿಯಲ್ಲಿ ಶೌರ್ಯ ಸಾಹಸಗಳನ್ನು ಪ್ರದರ್ಶಿಸಿದವರಿಗೆ ಪ್ರದಾನ ಮಾಡಲಾಗುವುದು. ಸೇನಾ ಪುರಸ್ಕಾರಗಳ ಪಟ್ಟಿಯಲ್ಲಿ ಇದರ ಆದ್ಯತೆ ಪರಮ ವೀರ ಚಕ್ರ ಮತ್ತು ಮಹಾ ವೀರ ಚಕ್ರಗಳ ನಂತರ ಮೂರನೆಯದ್ದಾಗಿದೆ.*
No comments:
Post a Comment