☀️ *'ರಾಷ್ಟೀಯ ಆದಾಯ' ಎಂದರೇನು?*
*— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್ಯವಾಗಿದೆ. ಅದು ಒಂದು ವರ್ಷದ ಅವಧಿಯಲ್ಲಿ ದೇಶವೊಂದು ಗಳಿಸುವ ಸಮಗ್ರ ಆದಾಯವಾಗಿರುತ್ತದೆ.'*
— 'ರಾಷ್ಟೀಯ ಆದಾಯ' ವನ್ನು 'ರಾಷ್ಟೀಯ ಭಾಜ್ಯಾಂಶ'(National dividend), 'ರಾಷ್ಟೀಯ ಉತ್ಪನ್ನ'(National Output) , 'ರಾಷ್ಟೀಯ ವೆಚ್ಚ' (National Expenditure) ಎಂಬ ಪದಗಳಿಗೆ ಪರ್ಯಾಯ ಪದವನ್ನಾಗಿ ಬಳಸಲಾಗುತ್ತಿದೆ.
☀️ *ಒಟ್ಟು ರಾಷ್ಟೀಯ ಉತ್ಪನ್ನ (Gross National Product—GNP) ಎಂದರೇನು?*
— *ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶವೊಂದು ಉತ್ಪಾದಿಸುವ ಸರಕು ಮತ್ತು ಸೇವೆಗಳ ಸಮಗ್ರ ಮೌಲ್ಯವೇ ಒಟ್ಟು ರಾಷ್ಟೀಯ ಉತ್ಪನ್ನ.*
*—> ಒಟ್ಟು ರಾಷ್ಟೀಯ ಉತ್ಪನ್ನ = ನಿವ್ವಳ ರಾಷ್ಟೀಯ ಉತ್ಪನ್ನ + ಸವಕಳಿ ವೆಚ್ಚ (Depreciation Cost)*
☀️ *ನಿವ್ವಳ ರಾಷ್ಟೀಯ ಉತ್ಪನ್ನ (Net National Product—NNP) ಎಂದರೇನು?*
— *ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಮಾಡಲಾದ ನಿವ್ವಳ ಉತ್ಪಾದನೆಯ ಮಾರುಕಟ್ಟೆಯ ಮೌಲ್ಯವನ್ನು 'ನಿವ್ವಳ ರಾಷ್ಟೀಯ ಉತ್ಪನ್ನ' ಎನ್ನಲಾಗುತ್ತದೆ.*
*—> ನಿವ್ವಳ ರಾಷ್ಟೀಯ ಉತ್ಪನ್ನ = ಒಟ್ಟು ರಾಷ್ಟೀಯ ಉತ್ಪನ್ನ -ಸವಕಳಿ ವೆಚ್ಚ.*
☀️ *ಒಟ್ಟು ದೇಶಿಯ ಉತ್ಪನ್ನ (Gross Domestic Product—GDP) ಎಂದರೇನು?*
— *ಒಟ್ಟು ದೇಶಿಯ ಉತ್ಪನ್ನವು ಆರ್ಥಿಕತೆಯೊಂದು ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು ಮತ್ತು ಸೇವೆಗಳ ಪರಿಚಲನೆಯ ಮಾಪನವಾಗಿದೆ.*
★ ಅದು ಸರಕು ಮತ್ತು ಸೇವೆಗಳ ಉತ್ಪಾದನೆಯನ್ನು ಮಾರುಕಟ್ಟೆ ಬೆಲೆಗಳಲ್ಲಿ ಮೌಲ್ಯದ ಅಂದಾಜು ಮಾಡಿ ಒಟ್ಟುಗೂಡಿಸುವ ಮೂಲಕ ಪಡೆಯಲಾಗುತ್ತದೆ.
☀️ *ನಿವ್ವಳ ದೇಶಿಯ ಉತ್ಪನ್ನ (Net Domestic Product—NDP) ಎಂದರೇನು?*
— ಮಾರುಕಟ್ಟೆ ಬೆಲೆಯಲ್ಲಿ ನಿವ್ವಳ ದೇಶಿಯ ಉತ್ಪನ್ನ ಎಂದರೆ ದೇಶದೊಳಗಡೆ ಉತ್ಪಾದಿಸಲಾದ ಸರಕು ಮತ್ತು ಸೇವೆಗಳ ಸವಕಳಿ ವೆಚ್ಚವನ್ನು ಹೊರತುಪಡಿಸಿದ ನಿವ್ವಳ ಮಾರುಕಟ್ಟೆ ಮೌಲ್ಯವಾಗಿದೆ.
★ ಉತ್ಪಾದನಾಂಗ ವೆಚ್ಚದಲ್ಲಿನ ನಿವ್ವಳ ದೇಶಿಯ ಉತ್ಪನ್ನ ಎಂದರೆ ಉತ್ಪಾದನಾಂಗಗಳು ಪಡೆಯುವ ಆದಾಯಗಳ ಮೊತ್ತವನ್ನು ಪ್ರತಿನಿಧಿಸುವ ದೇಶದೊಳಗಡೆ ಉತ್ಪಾದಿಸಿದ ಸರಕು ಮತ್ತು ಸೇವೆಗಳ ನಿವ್ವಳ ಮೌಲ್ಯವಾಗಿದೆ.
★ ನಿವ್ವಳ ದೇಶಿಯ ಉತ್ಪನ್ನವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.
*—> ಮಾರುಕಟ್ಟೆ ಬೆಲೆಯಲ್ಲಿ NDP = ಮಾರುಕಟ್ಟೆ ಬೆಲೆಯಲ್ಲಿ GDP - ಸವಕಳಿ ವೆಚ್ಚ.*
*—> ಉತ್ಪಾದನಾಂಗ ವೆಚ್ಚದಲ್ಲಿ NDP = ಮಾರುಕಟ್ಟೆ ಬೆಲೆಯಲ್ಲಿ NDP - ಪರೋಕ್ಷ ತೆರಿಗೆ + ಸಹಾಯಧನ.*
☀️ *ನಾಮರೂಪಿ(ಹಣರೂಪಿ) ಆದಾಯ (Nominal National Income) ಎಂದರೇನು?*
— ಪ್ರಸ್ತುತ ಬೆಲೆಗಳಲ್ಲಿ ಅಂದಾಜು ಮಾಡಲಾದ ರಾಷ್ಟೀಯ ಆದಾಯವನ್ನು ನಾಮರೂಪಿ(ಹಣರೂಪಿ) ಆದಾಯ ಎನ್ನಲಾಗುತ್ತದೆ.
☀️ *ನೈಜ ರಾಷ್ಟೀಯ ಆದಾಯ (Real National Income) ಎಂದರೇನು?*
— *ಆಧಾರ ವರ್ಷವನ್ನಾಗಿ ತೆಗೆದುಕೊಂಡ ವರ್ಷದ ಸಾಮಾನ್ಯ ಬೆಲೆಯ ಮಟ್ಟದ ಮುಖೇನ ವ್ಯಕ್ತಪಡಿಸಲಾಗುವ ರಾಷ್ಟೀಯ ಆದಾಯವನ್ನು ನೈಜ ರಾಷ್ಟೀಯ ಆದಾಯ ಎನ್ನಲಾಗುತ್ತದೆ.*
☀️ *ತಲಾ ಆದಾಯ (Percapita Income) ಎಂದರೇನು?*
.
— *ಒಂದು ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಒಂದು ವರ್ಷದ ಸರಾಸರಿ ಆದಾಯವನ್ನು ತಲಾ ಆದಾಯ ಎನ್ನಲಾಗುತ್ತದೆ.*
★ ತಲಾ ಆದಾಯವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.
*ರಾಷ್ಟೀಯ ಆದಾಯ*
*—> ತಲಾ ಆದಾಯ = ———————*
*ಒಟ್ಟು ಜನಸಂಖ್ಯೆ*